ಲಕ್ಷಾಂತರ ಭಕ್ತಾದಿಗಳ ಮುಂದೆ ವಿಜೃಂಭಣೆಯಿಂದ ನಡೆದ ರಥೋತ್ಸವ
ಜನಸಮೋಹದ ಕಣ್ಮನಸೇದ ಅಮೋಘ ರಥೋತ್ಸವ
ಭಕ್ತಿಯ ಪರಾಕಾಷ್ಠೆಯಲ್ಲಿ ಕೊಟ್ಟೂರೇಶನ ರಥೋತ್ಸವ
ಕೊಟ್ಟೂರು : ಸಮ ಸಮಾಜ ನಿರ್ಮಾಣದ ಹರಿಕಾರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಜಯ ಘೋಷದ ನಡುವೆ ಅದ್ದೂರಿಯಾಗಿ ಜರುಗಿತು.
ಲಕ್ಷಾಂತರ ಭಕ್ತರು ರಥ ಎಳೆಯುವ ಮೂಲಕ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಸಂಭ್ರಮಿಸಿದರು.
ಸಂಪ್ರದಾಯದಂತೆ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಬಂದ ಸ್ವಾಮಿಗೆ ಹರಿಜನ
ಕೇರಿಯಲ್ಲಿ ದಲಿತ ಮಹಿಳೆಯೊಬ್ಬರು ಆರತಿ ಬೆಳಗಿದ ನಂತರವೇ ರಥದತ್ತ ಪಲ್ಲಕ್ಕಿ ಸಾಗಿತು.
‘ಸ್ವಾಮಿ ರಥವೇರಿದ ಬಳಿಕ ರಥ ಎಳೆಯಲು ಆರಂಭಿಸಿದಾಗ ಮಿಣಿ ‘ಅಗ್ಗ’ ತುಂಡಾದ ಕಾರಣ ಭಕ್ತರಲ್ಲಿ ಕೆಲ ಕಾಲ ಆತಂಕ ಮೂಡಿತ್ತು. ನಂತರ ಬದಲಿ ಅಗ್ಗ ಸಿದ್ದಗೊಳಿಸಿ ರಥೋತ್ಸವ ಮುಂದುವರಿಸ ಲಾಯಿತು. ರಥೋತ್ಸವದ ವೇಳೆ ರಥದ ಮಿಣಿ ತುಂಡಾದ ಘಟನೆ ಕಳೆದ ವರ್ಷವೂ ನಡೆದಿತ್ತು. ಈ
ಬಾರಿಯೂ ಅದೇ ಪುನರಾವರ್ತನೆಯಾದ ಕಾರಣ ಭಕ್ತರು ಆತಂಕಗೊಂಡಿದ್ದರು. ಆದರೆ ಶೀಘ್ರವೇ ಪರ್ಯಾಯ ವ್ಯವಸ್ಥೆ ಮಾಡಿ ರಥ ಚಲಿಸುವಂತೆ ನೋಡಿಕೊಳ್ಳಲಾಯಿತು.
ಮಹಲ್ ಮಠದ ಕ್ರಿಯಾ ಮೂರ್ತಿ ಪ್ರಕಾಶ ದೇವರು, ಪ್ರಧಾನ ಧರ್ಮಕರ್ತ ಎಂ.ಕೆ. ಶೇಖರಯ್ಯ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹಾಗೂ ಎಸ್ಸಿ ಜಾಹ್ನವಿ ಉಪಸ್ಥಿತರಿದ್ದರು.
ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಎಚ್. ಸವಿತಾ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಅವರ ನೇತೃತ್ವದಲ್ಲಿ ವ್ಯವಸ್ಥೆಗಳನ್ನು ಮಾಡ ಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿತ್ತು